Home

 ಸಾರ್ವಜನಿಕ ಕುಂದು ಕೊರತೆ ಸಹಾಯವಾಣಿ ಸಂಖ್ಯೆ:08359-231165

Municipal Reforms Cell, Directorate of Municipal Administration has won the Bronze Award for the project Aasthi (GIS based property tax information System) in National Awards for e-Governance 2011


    ಗಣಕೀಕರಣ :  ಕೊಪ್ಪಳ  ನಗರಸಭೆಯು ಆಸ್ತಿ ತೆರಿಗೆ ಸಂಗ್ರಹಣೆಯನ್ನು ಗಣಕೀಕರಣ ಮಾಡಿದ್ದು .  ಇದರ ಜೊತೆಗೆ 1990 ರಿಂದ ಈ ದಿನದವರೆಗೆ  ಜನನ ಮತ್ತು ಮರಣ ದಾಖಲೆಗಳನ್ನು ಗಣಕೀಕೃತಗೊಳಿಸಿದ್ದು ನಾಗರೀಕರು ಇನ್ನು ಮುಂದೆ ನಾಗರೀಕ ಸೇವಾ ಕೇಂದ್ರದಲ್ಲೆ ಜನನ-ಮರಣ ನೊಂದಣಿ ಮತ್ತು ಪ್ರಮಾಣ ಪತ್ರಗಳನ್ನು ಸೇವಾ ಶುಲ್ಕ ಪಾವತಿಸಿ ಪಡೆಯಬಹುದೆಂದು ತಿಳಿಸಲು ಹರ್ಷಿಸುತ್ತೇವೆ.ಹಾಗೂ ಇದರ ಬಳಕೆಯನ್ನು ಸದುಪಯೋಗಪಡಿಸಿಕೊಳ್ಳಬೇಕೇಂದು ಸಾರ್ವಜನಿಕರಿಗೆ ತಿಳಿಯಪಡಿಸಲಾಗಿದೆ.  



    COMPUTERIZATION: We are very happy to intimate the citizens of Koppal city that we have computerized the collection of Property Tax , Birth and Death certificates from 1990 to till date under state Government Nirmala Nagar computerization scheme, from now on wards citizens are requested to visit the citizen service centre at the office for registration and getting of Birth and Death certificates by paying service fee. Citizens are requested to make use of this facility.  


   ಕೊಪ್ಪಳ ನಗರದ ಇತಿಹಾಸ

           ಕೊಪ್ಪಳ ನಗರವು ಈ ಮೊದಲು ರಾಯಚೂರು ಜಿಲ್ಲೆಯ ಒಂದು ತಾಲೂಕು ಕೇಂದ್ರವಾಗಿತ್ತು. ಈಗ 1997-98 ರಲ್ಲಿ ಪ್ರತ್ಯೇಕ  ಹೊಸ ಜಿಲ್ಲೆಯಾಗಿ ನಿರ್ಮಾಣಗೊಂಡಿತು. ಕೊಪ್ಪಳ ಜಿಲ್ಲೆಯು ಇತಿಹಾಸವು ಶಿಲಾಯುಗದಿಂದ ಪ್ರಾರಂಭವಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಕಲ್ಲು ಗೋರಿಗಳು ಕೊಪ್ಪಳ ಗುಡ್ಡದಲ್ಲಿ ಸಿಗುತ್ತವೆ. 10ನೇ ಶತಮಾನದ ಮೌರ್ಯರ ಕಾಲದಲ್ಲಿ ಅತ್ಯಂತ ಪವಿತ್ರ ಭೌದ್ದರ ಕ್ಷೇತ್ರವಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಅಶೋಕನ ಅನೇಕ ಶಾಸನಗಳು ಈಗಲೂ ಸಿಗುತ್ತವೆ. ಗಂಗ ಅರಸರು ಕೂಡ ಈ ನಗರದ ಅಭಿವೃದ್ಧಿಗೆ ಮತ್ತು ಕೋಟೆ ನಿರ್ಮಾಣ ಇವರ ಕಾಲದಲ್ಲಿ ನಿರ್ಮಾಣಗೊಂಡಿವೆ ನಂತರ ಟಿಪ್ಪು ಸುಲ್ತಾನನು  ಫ್ರಂಚ್ ಇಂಜಿನೀಯರ್ ಸಹಾಯದಿಂದ ಪುನರ್ ನಿರ್ಮಾಣ ಮಾಡಿದನು ನಂತರ ಬ್ರಿಟೀಷರ ಕಾಲಕ್ಕೆ ಈ ಕೋಟೆಯನ್ನು ವಶಪಡಿಸಿಕೊಂಡರು. ಹೈದರಾಬಾದ ನಿಜಾಮನ ಆಡಳಿತ ವ್ಯಾಪ್ತಿಗೆ ಒಪ್ಪಿದರು.

           ಕೊಪ್ಪಳ ನಗರವು ರಾಜ ನೃಪತುಂಗ ಕಾಲಕ್ಕೆ ವಿಧಿತ  ಮಹಾ ಕೊಪಣ ನಗರವೆಂದು ಪ್ರಸಿದ್ಧಿ ಪಡೆದಿತ್ತು, ಅತ್ತಿಮಬ್ಬೆಯ ಕಾಲದಲ್ಲಿ ನಗರದಲ್ಲಿ ಅನೇಕ ಜೈನ ಬಸದಿಗಳು ನಿರ್ಮಾಣಗೊಂಡವು. ಜೈನ್ ಕಾಶಿವೆಂದು ಪ್ರಸಿದ್ಧಿ ಪಡೆದಿತ್ತು 12ನೇ ನೇ ಶತಮಾನದಿಂದ ಈಚೆಗೆ ಪ್ರಸಿದ್ಧ ಲಿಂಗಾಯತ ಮಠ ಗವಿಮಠ ತನ್ನ ಅನೇಕ ವಿದ್ಯಾ ಸಂಸ್ಥೆಗಳ ಹಾಗೂ ಉಚಿತ ಪ್ರಸಾದ ನಿಲಯಗಳ ಮುಲಕ ಪ್ರಸಿದ್ಧಿಯನ್ನು ಪಡೆದಿರುತ್ತದೆ.

           ಇತ್ತೀಚಿನ ದಿನಗಳಲ್ಲಿ ಕೊಪ್ಪಳ ನಗರವು ಪ್ರಮುಖ ವಾಣಿಜ್ಯ ಕೇಂದ್ರವಾಗಿ ರೂಪುಗೊಳ್ಳುತ್ತಿದೆ ಇದಕ್ಕೆ ಸಂಬಂಧಿಸಿದಂತೆ ಸುಂದರ ವ್ಯವಸಾಯಕ್ಕೆ ಸಂಬಂಧಿಸಿದ ಮಾರುಕಟ್ಟೆ ನಿರ್ಮಾಣಗೊಂಡಿದ್ದು ಪ್ರಮುಖ ವ್ಯವಸಾಯ ಉತ್ಪನ್ನಗಳಾದ ಜೋಳ, ಸಜ್ಜೆ, ಶೇಂಗಾ, ಹತ್ತಿ ಮತ್ತು ಇನ್ನಿತರೆ ಎಣ್ಣೆ ಕಾಳುಗಳಗೆ ಉತ್ತಮ ಮಾರುಕಟ್ಟೆ ಒದಗಿಸಿದೆ. ಅದೇ ರೀತಿಯಲ್ಲಿ ಕೈಗಾರಿಕೆಗಳಿಗೆ ಸಂಬಂಧಿಸಿದಂತೆ ಅನೇಕ ಬೃಹತ್ ಮಧ್ಯಮ ಕೈಗಾರಿಕೆಗಳು ಸ್ಥಾಪನೆಗೊಂಡು ಪ್ರಮುಖ ಕೈಗಾರಿಕಾ ಕೇಂದ್ರವಾಗಿ ರಾಜ್ಯದಲ್ಲಿ ಹೊರಹೊಮ್ಮುತ್ತಿದೆ. ಇದರಿಂದಾಗಿ ಜಿಲ್ಲೆಯ ಹಾಗೂ ರಾಜ್ಯದ ವಿದ್ಯಾವಂತ ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸಲು ಅನುಕೂಲವಾಗಿದೆ.

 

 

 

"This page is maintained by Commissioner,CMC,Koppal"  the last Updated date 05-02-2012

No. Of Visitors :
Last Updated   : 13/03/2012  Release History
Release 2.0.0, Powered By Karnataka Municipal Data Society & maintained by Koppal CMC
This website can best viewed with the resolution 1024 * 768 using Internet Explorer 7.0 or above.
Valid CSS!